top of page

ನಮ್ಮ ಪ್ರಾಥಮಿಕ ಶಾಲೆಯ ಬಗ್ಗೆ:

1988-89 ನೇ ಸಾಲಿನಲ್ಲಿ ಮಾನ್ಯ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ರಾಯಚೂರು ಅವರ ಅನುಮತಿಯೊಂದಿಗೆ ಒಂದನೇ ತರಗತಿಯನ್ನು ಕುಮಾರಿ ರಾಜೇಶ್ವರಿ ತಂದೆ ಲಕ್ಷ್ಮೀ ನಾರಾಯಣ ಹಂಚಾಟೆ ಎಂಬ ವಿದ್ಯಾರ್ಥಿನಿಯ ಮೊದಲ ದಾಖಲಾತಿಯೊಂದಿಗೆ ಪ್ರಾರಂಭಿಸಿತು.

1992-93 ನೇ ವರ್ಷದಲ್ಲಿ 1 ರಿಂದ 4 ನೇ ತರಗತಿಗೆ ಮಾನ್ಯತೆ. ಪ್ರಾಥಮಿಕ ಶಾಲಾ ಕಟ್ಟಡದ ಉದ್ಘಾಟನೆಯನ್ನು ದಿನಾಂಕ: 06-12-1993 ಸೋಮವಾರದಂದು ಶ್ರೀ ಶ್ರೀ ಶ್ರೀ ಷಡಕ್ಷರಿ ಶಿವಯೋಗಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಮುಗಳಖೋಡ ಮಠ ಇವರ ಕರಕಮಲದಿಂದ ನೆರವೇರಿಸಲಾಯಿತು.

1993-94 ನೇ ಸಾಲಿನಲ್ಲಿ 5ನೇ ತರಗತಿಯನ್ನು ಪ್ರಾರಂಭ ಮಾಡಲಾಯಿತು. ಹೀಗೆ 1994-95 ರಲ್ಲಿ 6ನೇ ತರಗತಿ 1996-97ರಲ್ಲಿ 7ನೇ ತರಗತಿಯನ್ನು ಪ್ರಾರಂಭಿಸಿ ಮಕ್ಕಳಲ್ಲಿ ಚೈತನ್ಯಪೂರ್ಣವಾದ ಶಿಕ್ಷಣ ನೀಡುವಲ್ಲಿ ಶಿಕ್ಷಕರು, ಯಶಸ್ವಿಯಾದರು. ಇದಕ್ಕೆ ನಿದರ್ಶನವೆಂಬಂತೆ ಮಾರ್ಚ್ 1997 ರಲ್ಲಿ ನಡೆದ ಪ್ರಥಮ 7 ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಶೇಕಡ 98% ರಷ್ಟು ಫಲಿತಾಂಶ ಪಡೆಯಿತು. ದಿನಾಂಕ:03-11-2011 ರಂದು ಶಾಲೆಯು ಅನುದಾನದ ವ್ಯಾಪ್ತಿಗೆ ಒಳಪಟ್ಟಿತು. ದಿನಾಂಕ: 12-12-2012 ರಂದು ಅಕ್ಷರ ದಾಸೋಹ ಕಾರ್ಯಕ್ರಮದಡಿಯಲ್ಲಿ ಬಿಸಿಯೂಟದ ಯೋಜನೆ ಜಾರಿಯಾಗಿ ದಿನಾಂಕ: 29-01-2013 ರಂದು ಬಿಸಿಯೂಟದ ಅಡುಗೆ ಸಿಬ್ಬಂದಿಯವರನ್ನು ನೇಮಕಾತಿ ಮಾಡಿಕೊಳ್ಳುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದರ ಜೊತೆಗೆ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕದಂತ ಸರಕಾರದ ಸೌಲಭ್ಯಗಳನ್ನು ದೊರಕಿಸಿಕೊಡುವುದರ ಮೂಲಕ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಶಾಕಿರಣವಾಗಿದೆ.

ಪ್ರಸಕ್ತ ಸೇವಾ ನಿರತ ಶಿಕ್ಷಕರ ವಿವರ:

ಶ್ರಿ ಬಸವರಾಜ ಮಡಿವಾಳ              ಮುಖ್ಯೋಪಾಧ್ಯಾಯರು

ಶ್ರೀ ದಾವಲಸಾಬ ಬಂಡಿ                ದೈಹಿಕ ಶಿಕ್ಷಕರು

ಶ್ರೀಮತಿ ಸಾವಿತ್ರಿ                        ಸಹ ಶಿಕ್ಷಕಿ

ಶ್ರೀ ಚಂದಪ್ಪ                              ಸಹ ಶಿಕ್ಷಕ

ಕು.ರಂಜನಾ                              ಸಹ ಶಿಕ್ಷಕಿ

ಶ್ರೀ ಶಿವಶಂಕರ                           ಸಹ ಶಿಕ್ಷಕಿ

ಕು.ರಾಗಿಣಿ                                ಸಹ ಶಿಕ್ಷಕಿ

 

ಮುಖ್ಯೋಪಾಧ್ಯಾಯರ ಪರಂಪರೆ:

ಶ್ರೀಮತಿ ಯಂಕಮ್ಮ           :         01-08-1986 ರಿಂದ 31-03-1992 ರವರೆಗೆ

ಶ್ರೀ ಶರಣಪ್ಪ ತುಮಕೂರ     :         01-06-1992 ರಿಂದ 01-08-1994 ರವರೆಗೆ

ಶ್ರೀ ಅರ್ಜುನ ಕುರ್ಕಿಹಳ್ಳಿ      :         02-08-1994 ರಿಂದ 24-08-1998 ರವರೆಗೆ

ಶ್ರೀ ಶರಣಪ್ಪ ಬಿಸನಾಳ       :         26-08-1998 ರಿಂದ 30-06-1999 ರವರೆಗೆ

ಶ್ರೀ ಬಸವೇಶ್ವರ ಹುಗ್ಗಿ         :         01-07-1999 ರಿಂದ 08-06-2004 ರವರೆಗೆ

ಶ್ರೀ ಸಿದ್ರಾಮಯ್ಯ ಸ್ವಾಮಿ     :         09-06-2004 ರಿಂದ 21-07-2005 ರವರೆಗೆ

ಶ್ರೀ ದಾವಲಸಾಬ              :         22-07-2005 ರಿಂದ 23-07-2008 ರವರೆಗೆ

ಶ್ರೀ ಬಸವರಾಜ ಮಡಿವಾಳ ತುಮಕೂರ: 24-07-2008- ಸೇವೆಯಲ್ಲಿ

  • Facebook
  • Twitter
  • YouTube
  • Instagram
bottom of page