top of page

ನಮ್ಮ ಪ್ರೌಢಶಾಲೆಯ ಬಗ್ಗೆ:

ಸನ್ 1997ರಲ್ಲಿ 8 ನೇ ತರಗತಿಗೆ 18 ವಿದ್ಯಾರ್ಥಿಗಳೊಂದಿಗೆ ಪ್ರೌಢಶಾಲೆ ಪ್ರಾರಂಭಿಸಲಾಯಿತು. ದಿನಾಂಕ: 09-09-1997 ರಂದು ಮಂಗಳವಾರದಂದು ಶ್ರೀ ಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಸಂಸ್ಥಾನಮಠ ಡಂಬಳ-ಗದಗ ಇವರಿಂದ ಹೊಸ ಪ್ರೌಢಶಾಲಾ ಕಟ್ಟಡದ ಉದ್ಘಾಟನೆಗೊಂಡಿತು.

 

ಪ್ರೌಢಶಾಲೆಯ ಹೆಮ್ಮೆಯ ಸಾಧನೆ ಎಂದರೆ ಸನ್ 2003-04 ನೇ ಸಾಲಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರಾಸರಿ ಶೇ. 90% ಮೇಲೆ ಫಲಿತಾಂಶ ಪಡೆದಿದ್ದು ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಅಭಿನಂದನಾ ಪ್ರಮಾಣ ಪತ್ರ ಪಡೆದಿದ್ದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.

 

ಮಕ್ಕಳಿಗೆ ಪ್ರತಿ ತಿಂಗಳು ಕಿರು ಪರೀಕ್ಷೆ ಮತ್ತು ರಸಪ್ರಶ್ನೆ ಕಾರ್ಯಕ್ರಮ ಹಾಗೂ ವಿಚಾರ ಸಂಕೀರ್ಣ ಮತ್ತು ಶೈಕ್ಷಣಿಕ ಪ್ರವಾಸ ವನಭೋಜನ ಇಂತಹ ಹಲವಾರು ಕ್ರಿಯಾ ಯೋಜನೆಗಳ ಮೂಲಕ ಪ್ರತಿ ವರ್ಷ ಆದರ್ಶ ವಿದ್ಯಾರ್ಥಿಗಳ ಆಯ್ಕೆ ಬೆಳ್ಳಿ ಪದಕ ನೀಡುವುದರ ಮೂಲಕ ಮಕ್ಕಳಲ್ಲಿ ಉನ್ನತ ಮಟ್ಟದ ಶಿಕ್ಷಣ ನೆಲೆಗಟ್ಟಲು ಶ್ರಮಿಸಲಾಗುತ್ತಿದೆ.

 

ಪ್ರಸ್ತುತ ಸಾಲಿನಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು:

  1. ಶ್ರೀ ಶಿವರಾಜ ಅಕ್ಕಿಕಲ್ ಮು.ಗು (ಇಂಗ್ಲೀಷ ಶಿಕ್ಷಕರು)

  2. ಶ್ರೀ ಬಸವೇಶ್ವರ ಹುಗ್ಗಿ ಸ.ಶಿ (ಕನ್ನಡ ಶಿಕ್ಷಕರು)

  3. ಶ್ರೀ ಮಹಿಬೂಬಲಿ ಸ.ಶಿ (ಹಿಂದಿ ಶಿಕ್ಷಕರು)

  4. ಶ್ರೀಮತಿ ಚೋಳಮ್ಮ ಜಿ. ಸ.ಶಿ ( ಸಮಾಜ ಶಿಕ್ಷಕಿ)

  5. ಶ್ರೀಮತಿ ಶಿಲ್ಪಾ ಸ.ಶಿ (ವಿಜ್ಞಾನ ಶಿಕ್ಷಕಿ)

  6. ಶ್ರೀ ಮಾರ್ತಂಡಪ್ಪ ಗೋನಾಲ (ದೈ.ಶಿ)

  7. ಕುಮಾರಿ ಶ್ವೇತಾ (ಕಂಪ್ಯೂಟರ್ ಶಿಕ್ಷಕಿ)

  • Facebook
  • Twitter
  • YouTube
  • Instagram
bottom of page